Monday, June 28, 2010

Grass Jewel - India's smallest butterfly

Grass Jewel (Freyeria putli) India's smallest butterfly. This specimen measured around a centimetre wide...

2 comments:

  1. ಅಭಿಜ್ಞ,
    ನಿನ್ನ ಬ್ಲಾಗನ್ನು ಕೂಲಂಕುಷವಾಗಿ ತಿರುವಿಹಾಕಿದೆ. ಇದಂತೂ ನನಗೆ ಹೊಸತು. ನಿನ್ನ ಹವ್ಯಾಸವನ್ನು ಗಮನಿಸಿದ ನಂತರವೇ ನನಗೆ ಚಿಟ್ಟೆ ವೀಕ್ಷಣೆ ಮತ್ತು ಫೋಟೋಗ್ರಫಿಯನ್ನು ಹೀಗೆ ಒಂದು ವ್ಯವಸ್ಥಿತ ರೀತಿಯಲ್ಲಿ ಹವ್ಯಾಸವಾಗಿ ರೂಢಿಸಿಕೊಂಡವರಿದ್ದಾರೆ, ಅದನ್ನು butterflying ಎಂದು ಕರೆಯುತ್ತಾರೆ ಅಂತ ಗೊತ್ತಾಗಿದ್ದು! ಅದಕ್ಕೆ ಮುಂಚೆ ಪಕ್ಷಿ ವೀಕ್ಷಣೆ, ನಕ್ಷತ್ರ ವೀಕ್ಷಣೆ ಕೇಳಿದ್ದೆ, ಚಿಟ್ಟೆ ವೀಕ್ಷಣೆ ಇದೇ ಮೊದಲು, ಇರಲಿ. ಪ್ರತಿ ಮನುಷ್ಯನಿಗೂ ಒಂದು ಹವ್ಯಾಸ ಅನ್ನುವುದು ತುಂಬಾ ಮುಖ್ಯ. ನಿತ್ಯ ಜೀವನದ ಜಂಜಡದಲ್ಲಿ ಕಳೆದುಹೋಗದೇ ನಮ್ಮತನವನ್ನು ಉಳಿಸಿಕೊಳ್ಳಲು ಇಂಥ ಕ್ರಿಯಾಶೀಲ ಚಟುವಟಿಕೆಗಳು ಸಹಕಾರಿ. ಇಂಥ ಹವ್ಯಾಸಗಳು ನಮ್ಮ ಅನುಭವ ಮತ್ತು thought horizon ಗಳನ್ನು ವಿಸ್ತರಿಸುತ್ತವೆ. ಇಂಥ ಕಿರಿಯ ವಯಸ್ಸಿಗೆ ಇಂಥದೊಂದು ಹವ್ಯಾಸವನ್ನು ರೂಢಿಸಿಕೊಂಡಿರುವುದಕ್ಕೆ, ಅದನ್ನು ಪ್ರೋತ್ಸಾಹಿದ ನಮ್ಮಕ್ಕನಿಗೂ ಒಂದು ಅಭಿನಂದನೆ.
    ಈ ಫೋಟೋಗ್ರಫಿ ಅದರಲ್ಲೂ wildlife photography ಮತ್ತು ಅದರ technicalities ಬಗ್ಗೆ ನನಗೇನೂ ಗೊತ್ತಿಲ್ಲ. but as a viewer i enjoyed it a lot. ಒಂದು ಸಲಹೆ - ಜನ ಬರಿ ಫೋಟೋ ನೋಡುತ್ತಾ ಎಷ್ಟೊತ್ತು ತಾನೇ ಇರ್ತಾರೆ? ಚಿಟ್ಟೆಗಳ ಮತ್ತು wildlife photography ಯ ಜೊತೆಗೆ ಅದಕ್ಕೆ ಸಂಬಂಧಿಸಿದಂಥ ಸಾಹಿತ್ಯವನ್ನು ಸೇರಿಸು. ನೆಟ್ನಲ್ಲೆ ರಾಶಿ ರಾಶಿ ಚಿಟ್ಟೆ ಸಾಹಿತ್ಯ ಇದೆ. ಹಾಗಂತ biological info ಮಾತ್ರ ಅಲ್ಲ. ಚಿಟ್ಟೆ ಬಗ್ಗೆ ಅದ್ಭುತವಾದ ಕವನಗಳಿವೆ, quotations ಇವೆ, ...ಇದೇನೂ ಅಲ್ಲದಿದ್ದರೂ write about your passion of butterflies, the process of photographing it, the ecological imbalance, how these butterflies are effected from it...- make it as interesting as possible. ನೀನು ಈ ನಿಟ್ಟಿನಲ್ಲಿ ಬರೆದ ಒಂದೆರಡು ಲೇಖನಗಳನ್ನು ನೋಡಿದೆ. ಒಳ್ಳೆ ಪ್ರಯತ್ನ. read jim corbett, rudyard kipling, tejaswi...ಬರೆಯೋದೇನು ಅಂತ ಕಷ್ಟ ಅಲ್ಲ ಮನಸಿನೋಳಗಿರುವುದಕ್ಕೆ ಅಲ್ಲವೇ ನಾವು ರೂಪ ಕೊಡುವುದು. ಬರೀತಾ ಬರೀತಾ ಬರುತ್ತೆ. good keep it up. keep the good work going.

    ReplyDelete
  2. ಅಭಿನಂದನೆಗಳು ಆದಿತ್ಯ ಅವರೇ! ನಿಮ್ಮ comment ನೋಡಿ ಬಹಳ ಸಂತೋಷವಾಯಿತು, ಇನ್ನೂ ಹೆಚ್ಚು ಮಾಡಲು ಉತ್ಸಾಹವೂ ಮೂಡಿತು. ಧನ್ಯವಾದಗಳು! ನಿಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿರಿ !!!

    ReplyDelete